ಮಹಾಭಾರತ ದಲ್ಲಿ ಕೃಷ್ಣ ಮಾಡಿದ ಉಪಾಯ ಪಾಲಿಸಿ ಕೊರೋನಾ ಓಡಿಸಿ

ಮಹಾಭಾರತದ ಯುದ್ಧದಲ್ಲಿ ತನ್ನ ತಂದೆ ದ್ರೋಣಾಚಾರ್ಯರನ್ನು ಮೋಸದಿಂದ ಕೊಂದಿದ್ದಕ್ಕೆ ಅಶ್ವತ್ಥಾಮನಿಗೆ ಕೋಪ ಬಂದಿತ್ತು.

ಅವನು ತನ್ನ ಬಳಿ ಇದ್ದ ನಾರಾಯಣ ಅಸ್ತ್ರವನ್ನು ಪಾಂಡವ ಸೇನೆಯ ಮೇಲೆ ಪ್ರಯೋಗಿಸಿದ.

ಈ ಅಸ್ತ್ರವನ್ನು ಎದುರಿಸಲು ಸಾಧ್ಯವಿರಲಿಲ್ಲ. ಯಾರ ಬಳಿ ಶಸ್ತ್ರವಿದೆಯೋ ಅವರ ಮೇಲೆ ಈ ಅಸ್ತ್ರ ಬೆಂಕಿ ಸುರಿಸಿ ನಾಶ ಮಾಡುತ್ತಿತ್ತು

ಜಾಣ ಶ್ರೀ ಕೃಷ್ಣ ಎಲ್ಲರಿಗೂ ಶಸ್ತ್ರ ತ್ಯಾಗ ಮಾಡಿ
ಸುಮ್ಮನೆ ಕೈ ಮುಗಿದು ನಿಲ್ಲಲು ತಿಳಿಸಿದ. ಮನಸ್ಸಿನಲ್ಲಿ ಕೂಡ ಯುದ್ಧದ ಯೋಚನೆ ಮಾಡಬೇಡಿ ಎಂದ.

ಅಶ್ವತ್ಥಾಮ ಹೂಡಿದ ನಾರಾಯಣ ಅಸ್ತ್ರ ಸಮಯ ಕಳೆದ ಮೇಲೆ ಶಾಂತವಾಯಿತು.
ಹೀಗೆ ಪಾಂಡವ ಸೇನೆ ಸುರಕ್ಷಿತವಾಗಿ ಉಳಿಯಿತು.

ಈ ಕಥೆ ಈಗೇಕೆ ಅಂತ ಅರ್ಥವಾಯಿತು ಅಲ್ಲವಾ?

ಎಲ್ಲಾ ಕಡೆ ಯುದ್ದ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಪ್ರಕೃತಿಯ ಈ ವಿಕೋಪ ತಾಳಲು ನಾವು ಸ್ವಲ್ಪ ದಿನ ಎಲ್ಲಾ ಬಿಟ್ಟು, ಒಳ್ಳೆಯ ಯೋಚನೆ ಮಾಡುತ್ತಾ ಒಂದು ಜಾಗದಲ್ಲಿ ಕುಳಿತರೆ ಸಾಕು. ಸಮಯಕ್ಕೆ ಅನುಸಾರವಾಗಿ ಪ್ರಕೃತಿಯ ವಿಕೋಪ ತಣ್ಣಗೆ ಆಗುತ್ತದೆ. ಕರೊನ ಕೂಡ ಶಾಂತವಾಗುತ್ತದೆ.

ಶ್ರೀ ಕೃಷ್ಣ ಮಾಡಿದ ಉಪಾಯ ನಾವೂ ಪಾಲಿಸಿದರೆ ಸಾಕಲ್ಲ...

Comments

Popular posts from this blog

Sharnbasva University: 3 teams selected to Second round by MHRD