ಕಲಿಯುಗ ಮುಗಿದು ಸತ್ಯಯುಗ ಬಂದಂತೆ ಕಾಣುತ್ತಿದೆ.
ಭಾನುವಾರ ಹಾದುಹೋದ ಚಿಂತೆಯಿಲ್ಲ,
ಸೋಮವಾರ ಉದ್ಯೋಗ ದಾತನ ಭಯವಿಲ್ಲ
ಹಣ ಸಂಪಾದಿಸುವ ಪ್ರಲೋಭನೆ ಇಲ್ಲ
ಖರ್ಚು ಮಾಡುವ ಎಂಬ ಜಂಬ ಇಲ್ಲ
ಹೋಟೆಲ್ನಲ್ಲಿ ತಿನ್ನಲು ಬಯಕೆಯಿಲ್ಲ
ಹೊರ ನಡೆದು ತಿರುಗಲು ಖುಷಿಯಿಲ್ಲ
ಚಿನ್ನ ಅಥವಾ ಬೆಳ್ಳಿಯ ಸುಳಿವಿಲ್ಲ
ಹಣದ ಅಪಾರ ಆಸಕ್ತಿ ಇಲ್ಲ
ಹೊಸ ಬಟ್ಟೆ ಧರಿಸಳು ಮನಸಿಲ್ಲ
ತನ್ನ ಅಂದದ ಬಗ್ಗೆ ಚಿಂತಿಸಲು ಸರಿ ಸಮಯವಲ್ಲ
*ಅಂದರೆ ನಾವು ಬಿಡುಗಡೆಗೊಂಡಿದ್ದೇವೆಯೇ? ಅಥವಾ ಮುಕ್ತರಾಗಿದ್ದೇವೆಯೇ*
ಕಲಿಯುಗ ಮುಗಿದು ಸತ್ಯಯುಗ ಬಂದಂತೆ ಕಾಣುತ್ತಿದೆ.
ಗೀತೆ, ಭಾಗವತ ಪಠಣ, ದುರ್ಗಾ ಪೂಜೆ, ನಮಸ್ಕಾರ, ಉಪವಾಸ, ಹವನ, ರಾಮಾಯಣ, ಮಹಾಭಾರತ ಎಲ್ಲೆಲ್ಲೂ ಕೇಳ ಸಿಗುತ್ತಿದೆ, ಕಣ್ಣಿಗೆ ಗೋಚರಿಸುತ್ತಿದೆ.
ಸದ್ಯ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣವಾಗುತ್ತಿದೆ.
ಬುರ್ರೆಂದು ರಸ್ತೆಯಲ್ಲಿ ಓಡುವ ವಾಹನ ಹಾಗೂ
ಸುಯ್ಯೇಎಂದು ಹಾರುತ್ತಿದ್ದ ಗಗನಾಮಗಣ ಗಮನಕ್ಕೆ ಬರುತ್ತಿಲ್ಲ.
ಕೆಲಸದಿಂದ ಆಯಾಸ, ದಣಿದು ಮನೆಗೆ ಬರುವುದು ಅಪರೂಪ,
ಪ್ರತಿಯೊಬ್ಬರ ಜೀವನ ಸರಳವಾಗಿದೆ - ಎಲ್ಲರೂ ಸಹಜವಾಗಿ ಸಿಗುವ ಆಹಾರ ತಿನ್ನುತ್ತಿದ್ದಾರೆ.
ಸಮಾನತೆ ಬಂದಿದೆ, ಕೈಗೊಂದು ಕಾಲಿಗೊಂದು ಸೇವಕರು ಇಲ್ಲ, ಎಲ್ಲರೂ ಮನೆಯಲ್ಲಿ ಒಟ್ಟಿಗೆ ಕೆಲಸ ಮಾಡುತಿದ್ದಾರೆ.
ಎಲ್ಲರೂ ಸದಾ ದೇವರನ್ನು ಸ್ಮರಿಸುತ್ತಿದ್ದಾರೆ.
ಜನರು ಅಪಾರ ದಾನ ಮಾಡುತ್ತಿದ್ದಾರೆ.
ಎಲ್ಲರ ಅಹಂ ಮೂಕವಾಗಿದೆ.
ಜನರು ಪರಸ್ಪರ ಸಹಕರಿಸುತ್ತಿದ್ದಾರೆ.
ಎಲ್ಲಾ ಮಕ್ಕಳು ಹೊರಗಿನಿಂದ ಬಂದು ಪೋಷಕರ ಬಳಿ ವಾಸಿಸುತ್ತಿದ್ದಾರೆ.
ಪ್ರತಿದಿನ ಮನೆಯಲ್ಲಿ ಭಜನೆ ನಡೆಯುತ್ತಿದೆ.
ಇದು ಸುವರ್ಣಯುಗವಲ್ಲದಿದ್ದರೆ, ಇನ್ನೇನು ಮತ್ತೆ ?🙏🙏
Comments
Post a Comment