ಗಂಡು ಮಗು ಬೇಕಾ ಅಥವ ಹೆಣ್ಣು ಮಗುನಾ?

ಒಬ್ಬ ಗರ್ಭಿಣಿ ಹೆಣ್ಣು ತನ್ನ ಗಂಡನಿಗೆ ಕೇಳ್ತಾಳೆ, “ನಿಮಗೆ ಗಂಡು ಮಗು ಬೇಕಾ ಅಥವ ಹೆಣ್ಣು ಮಗುನಾ?” 

ಗಂಡ;- ನಮಗೆ ಏನಾದರೂ ಗಂಡು ಮಗುವಾದರೆ, ನಾನು ಅವನಿಗೆ ಗಣಿತ ಕಲಿಸ್ತೇನೆ, ನಾವಿಬ್ಬರೂ ಆಟ ಆಡೋಕೆ ಹೋಗುತ್ತೇವೆ, ಅವನಿಗೆ ಮೀನು ಹಿಡಿಯೋದನ್ನು ಕಲಿಸ್ತೇನೆ,”

ಹೆಂಡತಿ;- “ಹೆಣ್ಣು ಮಗು ಆದರೆ?  

ಗಂಡ;- ಹೆಣ್ಣು ಮಗುವಾದರೆ ನಾನವಳಿಗೆ ಏನೂ ಕಲಿಸೋ ಅವಶ್ಯಕತೆನೇ ಇರಲ್ಲ”.
“ಏಕೆಂದರೆ ಆಕೇನೆ ನನಗೆ ಎಲ್ಲವನ್ನೂ ಕಲಿಸುತ್ತಾಳೆ, ಏನು ತೊಡಬೇಕು, ಏನು ತಿನ್ನಬೇಕು, ಏನು ಹೇಳಬೇಕು ಅಥವ ಏನು ಹೇಳಬಾರದು ಅಂತ.” “ಒಂದು ರೀತಿ ಆಕೆ ನನ್ನ ಎರಡನೆಯ ತಾಯಿಯಾಗಿರ್ತಾಳೆ, ನಾನು ಅವಳಿಗಾಗಿ ಏನೂ ಮಾಡದಿದ್ದರೂ, ನನ್ನನ್ನು ತನ್ನ ಹೀರೊ ಅಂದುಕೊಳ್ತಾಳೆ.”
“ಏನನ್ನಾದರೂ ನಿರಾಕರಿಸಿದರೆ ನನಗೆ ತಿಳಿ ಹೇಳ್ತಾಳೆ, ತನ್ನ ಗಂಡನಲ್ಲಿ ನನ್ನನ್ನು ನೋಡಲು ಬಯಸುತ್ತಾಳೆ.” ತಾನು ಎಷ್ಟೇ ದೊಡ್ಡವಳಾದರೂ, ತಂದೆ baby doll ಥರ ತನ್ನನ್ನು ಪ್ರೀತಿಸಲಿ ಎಂದು ಬಯಸುತ್ತಾಳೆ.”
“ಅವಳು ನನಗಾಗಿ ಜಗತ್ತನ್ನೇ ಎದುರಿಸ್ತಾಳೆ, ನನಗೆ ಕಷ್ಟ ಕೊಟ್ಟವರನ್ನು ಅವಳು ಎಂದಿಗೂ ಕ್ಷಮಿಸಲ್ಲ.”

 ಹೆಂಡತಿ;- ನಿಮ್ಮ ಪ್ರಕಾರ ನಿಮ್ಮ ಮಗಳು ಮಾಡಿದ್ದನ್ನು, ನಿಮ್ಮ ಮಗ ಮಾಡಲಾರನೆ?”

ಗಂಡ;- ಹಾಗೇನಿಲ್ಲ ಮಗನೂ ಮಾಡಬಹುದು, ಆದರೆ ಅವನಿಗೆ ಇದೆಲ್ಲಾ ಕಲಿಯಬೇಕಾಗುತ್ತೆ.” “ಆದರೆ ಮಗಳು, ಈ ಎಲ್ಲ ಗುಣಗಳ ಜೊತೆಗೆ ಹುಟ್ಟಿರ್ತಾಳೆ. ಮಗಳಿಗೆ ತಂದೆಯಾಗುವುದು ಪ್ರತಿ ವ್ಯಕ್ತಿಗೂ ಹೆಮ್ಮೆಯ ವಿಷಯ.”

ಹೆಂಡತಿ;- “ಆದರೆ ಮಗಳು ನಮ್ಮ ಜೊತೆ ಯಾವಾಗಲೂ ಇರಲ್ಲ ಅಲ್ವಾ?” 

ಗಂಡ;- “ಹೌದು, ಆದರೆ ನಾವು ಯಾವಾಗಲೂ ಅವಳ ಹ್ರದಯದಲ್ಲಿ ಇರ್ತೇವೆ.”
“ಅವಳು ಎಲ್ಲೇ ಇದ್ದರೂ ಅಪ್ಸರೆಯಾಗಿರ್ತಾಳೆ.” “ಮಗಳು ಹುಟ್ಟೋದೆ ನಿಸ್ವಾರ್ಥ ಪ್ರೀತಿ ಹಾಗೂ ಕಾಳಜಿ ಮಾಡೋಕೆ.” “ಮಗಳು” ಎಲ್ಲರ ಹಣೆಬರಹದಲ್ಲಿ ಇರಲ್ಲ, ದೇವರಿಗೆ ಇಷ್ಟವಾದ ಮನೆಯಲ್ಲಿ ಮಾತ್ರ ಮಗಳು ಹುಟ್ಟೋದು.”.

Comments

Popular posts from this blog

Sharnbasva University: 3 teams selected to Second round by MHRD